ಎದೆಗೆ ಬಿದ್ದ ಅಕ್ಷರ
ಗದ್ಯಪಾಠ- ಎದೆಗೆ ಬಿದ್ದಅಕ್ಷರ ದೇವನೂರು ಮಹಾದೇವ ಅವರು ಕ್ರಿ. ಶ. 1949 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ಎದೆಗೆ ಬಿದ್ದಅಕ್ಷರ, ಕುಸುಮಬಾಲೆ, ದ್ಯಾವನೂರು, ಒಡಲಾಳ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರ 'ಕುಸುಮಬಾಲೆ' ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಲಭಿಸಿದೆ. ಅ] ಒಂದು ವಾಕ್ಯದಲ್ಲಿ ಉತ್ತರಿಸಿ. 1. ಮನೆ ಮಂಚಮ್ಮ ಯಾರು? ಕವಿ ಸಿದ್ಧಲಿಂಗಯ್ಯ ಅವರು ದೇವನೂರು ಮಹಾದೇವ ಅವರಿಗೆ ಹೇಳಿದ ಕತೆಯಲ್ಲಿನ ಗ್ರಾಮದೇವತೆ ಮನೆ ಮಂಚಮ್ಮ. 2. ಮನೆಮಂಚಮ್ಮನಕತೆ ಹೇಳಿದ ಕವಿ ಯಾರು? ಮನೆಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ. 3. 'ಮಲೆಗಳಲ್ಲಿ ಮದುಮಗಳು' ಯಾರು ಬರೆದಕಾದಂಬರಿ? 'ಮಲೆಗಳಲ್ಲಿ ಮದುಮಗಳು' ಕುವೆಂಪು (ಕೆ. ವಿ. ಪುಟ್ಟಪ್ಪ) ಬರೆದ ಕಾದಂಬರಿ. 4. ಅಶೋಕ ಪೈ ಅವರ ವೃತ್ತಿಯಾವುದು? ಅಶೋಕ ಪೈ ಅವರು ಮನೋವೈದ್ಯರು. 5. ದೇವನೂರರ 'ನನ್ನದೇವರು' ಯಾರೆಂಬುದನ್ನು ಸ್ಪಷ್ಟೀಕರಿಸಿ. ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನುಇಟ್ಟರೆ ಅದು ದೇವನೂರು ಮಹಾದೇವ ಅವರ ದೇವರಾಗುತ್ತದೆ. ಆ] ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 1. ಅಶೋಕ ಪೈ ಅವರ...