ಅಪರೇಷನ್ ರಾಹತ್
ಆಪರೇಷನ್ ರಾಹತ್ 2013 ರ ಉತ್ತರ ಭಾರತದ ಪ್ರವಾಹದಿಂದ ಹಾನಿಗೊಳಗಾದ ನಾಗರಿಕರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆಗಾಗಿ, ಆಪರೇಷನ್ ರಾಹತ್ ಕೈಗೊಳ್ಳಲಾಗಿತ್ತು. ಅದೆ ರೀತಿ ಯೇಲನ ಬಿಕ್ಕಟ್ಟಿನ ಲ್ಲಿಯೂ ಅನುಸರಿಸಲಾಯಿತು. ಆಪರೇಷನ್ ರಾಹತ್ ಯೆಮೆನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸೌದಿ ಅರೇಬಿಯಾ ಮತ್ತು ಆ ದೇಶದಲ್ಲಿನ ಅದರ ಮಿತ್ರರಾಷ್ಟ್ರಗಳ 2015 ರ ಮಿಲಿಟರಿ ಹಸ್ತಕ್ಷೇಪದ ಸಂದರ್ಭದಲ್ಲಿ ಭಾರತೀಯ ನಾಗರಿಕರನ್ನು ಮತ್ತು ವಿದೇಶಿ ಪ್ರಜೆಗಳನ್ನು ಯೆಮನ್‌ನಿಂದ ಸ್ಥಳಾಂತರಿಸುವ ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯಾಗಿದೆ. ಸಮುದ್ರದ ಮೂಲಕ ಸ್ಥಳಾಂತರಿಸುವುದು 1 ಏಪ್ರಿಲ್ 2015 ರಂದು ಅಡೆನ್ ಬಂದರಿನಿಂದ ಪ್ರಾರಂಭವಾಯಿತು. ಭಾರತೀಯ ವಾಯುಪಡೆ ಮತ್ತು ಏರ್ ಇಂಡಿಯಾ ವಾಯು ಸ್ಥಳಾಂತರಿಸುವಿಕೆಯು 3 ಏಪ್ರಿಲ್ 2015 ರಂದು ಸನಾದಿಂದ ಪ್ರಾರಂಭವಾಯಿತು. 41 ದೇಶಗಳಿಂದ 960 ವಿದೇಶಿ ಪ್ರಜೆಗಳೊಂದಿಗೆ ಯೆಮನ್‌ನಲ್ಲಿ 4,640 ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲಾಗಿದೆ. ವಾಯು ಸ್ಥಳಾಂತರಿಸುವಿಕೆಯು 9 ಏಪ್ರಿಲ್ 2015 ರಂದು ಕೊನೆಗೊಂಡಿತು ಮತ್ತು ಸಮುದ್ರದ ಮೂಲಕ ಸ್ಥಳಾಂತರಿಸುವುದು 11 ಏಪ್ರಿಲ್ 2015 ರಂದು ಕೊನೆಗೊಂಡಿತು. ಕಾರ್ಯಾಚರಣೆಯ ವ್ಯಾಪ್ತಿ ಮಾನವೀಯ ಪರಿಹಾರ ಭಾರತೀಯ ಸಶಸ್ತ್ರ ಪಡೆ ಮತ್ತು ವಿದೇಶಾಂಗ ಸಚಿವಾಲಯವು ಯೋಜಿಸಿದೆ ಜನರಲ್ ವಿ.ಕೆ. ಸಿಂಗ್ ಹಿನ್ನೆಲೆ : ಯೆಮನ್‌ನ...