ರಾಷ್ಟ್ರೀಯ ಗ್ರಾಹಕರ ದಿನ National Consumer Day
ರಾಷ್ಟ್ರೀಯ ಗ್ರಾಹಕರ ದಿನ 1986 ರ ಡಿಸೆಂಬರ್ 24 ರಂದು 'ಗ್ರಾಹಕರ ಹಿತರಕ್ಷಣೆ/ಗ್ರಾಹಕರ ರಕ್ಷಣೆ ಕಾಯಿದೆ(ಕನ್ಸ್ಯುಮರ್ ಪ್ರೊಟೆಕ್ಷನ್ ಆಕ್ಟ್ ) ಯನ್ನು ಭಾರತದಲ್ಲಿ ಮಾಡಲಾಯಿತು. ಆದರಿಂದ ನಮ್ಮ ದೇಶದಲ್ಲಿ ಡಿಸೆಂಬರ್ 24 ನ್ನು "ರಾಷ್ಟ್ರೀಯ ಗ್ರಾಹಕ ದಿನ"ವಾಗಿ ಆಚರಿಸಲಾಗುತ್ತದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಮಾರುವವರಿಂದ ಕೊಳ್ಳುಗನು ಒಳಗಾಗಬಹುದಾದ ಶೋಷಣೆಯನ್ನು ತಪ್ಪಿಸಲು ವಿಶ್ವ ಸಂಸ್ಥೆಯ ಮಾರ್ಗಸೂಚಿಗಳ ಆಧಾರದ ಮೇಲೆ ಈ ಕಾಯಿದೆಯನ್ನು ಮಾಡಲಾಯಿತು.ಖಾಸಗಿ ವಲಯ, ಸರ್ಕಾರಿ ವಲಯ ಎನ್ನುವ ಭೇದವಿಲ್ಲದೆ, ತಾನು ಪಡೆಯುವ ಸೇವೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾಯಿದೆಯು ಗ್ರಾಹಕನಲ್ಲಿ ಹೆಚ್ಚು ಕಸುವು ತುಂಬುತ್ತದೆ. 'ಗ್ರಾಹಕ' ಅನ್ನುವ ಪದದ ವಿವರಣೆಯಿಂದ ಹಿಡಿದು ಗ್ರಾಹಕನಿಗಿರುವ ಹಕ್ಕುಗಳ ಬಗ್ಗೆ ಈ ಕಾಯಿದೆಯಲ್ಲಿ ವಿಸ್ತಾರವಾಗಿ ತಿಳಿಸಲಾಗಿದೆ. ಯಾವುದೇ ಒಂದು ಸರಕನ್ನು ಅಥವಾ ಸೇವೆಯನ್ನು ದುಡ್ಡು ಕೊಟ್ಟು ( ಮಾರುವವನು ಒಪ್ಪಿದಲ್ಲಿ ಹಣವನ್ನು ತಡವಾಗಿ ಪಾವತಿಸಿದರೂ ಸರಿ ) ಪಡೆಯುವವನು ಗ್ರಾಹಕನೆನಿಸಿಕೊಳ್ಳುತ್ತಾನೆ. ಹಾಗೆ ಒಬ್ಬ ಗ್ರಾಹಕನು ದುಡ್ಡು ಕೊಟ್ಟು ಪಡೆದ ಸೇವೆ ಅಥವಾ ಸರಕನ್ನು ಆ ಗ್ರಾಹಕನ ಒಪ್ಪಿಗೆ ಪಡೆದು ಬಳಸುವವರೂ ಗ್ರಾಹಕರಾಗುತ್ತಾರೆ ( ಹಣ ಕೊಡದೆ ಇದ್ದರೂ ). ಉದಾ : ಒಂದು ಮನೆಗೆ ಟಿ ವಿ ಯನ್ನು ಒಬ್ಬ ಹಣ ಕೊಟ್ಟು ತರುತ್ತಾನೆ. ಮನೆ ಮಂದಿಯೆಲ್...