ರಾಷ್ಟ್ರೀಯ ಗ್ರಾಹಕರ ದಿನ National Consumer Day

 ರಾಷ್ಟ್ರೀಯ ಗ್ರಾಹಕರ ದಿನ


1986 ರ ಡಿಸೆಂಬರ್ 24 ರಂದು 'ಗ್ರಾಹಕರ ಹಿತರಕ್ಷಣೆ/ಗ್ರಾಹಕರ ರಕ್ಷಣೆ ಕಾಯಿದೆ(ಕನ್ಸ್ಯುಮರ್ ಪ್ರೊಟೆಕ್ಷನ್ ಆಕ್ಟ್ ) ಯನ್ನು ಭಾರತದಲ್ಲಿ ಮಾಡಲಾಯಿತು. ಆದರಿಂದ ನಮ್ಮ ದೇಶದಲ್ಲಿ ಡಿಸೆಂಬರ್ 24 ನ್ನು "ರಾಷ್ಟ್ರೀಯ ಗ್ರಾಹಕ ದಿನ"ವಾಗಿ ಆಚರಿಸಲಾಗುತ್ತದೆ. ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಮತ್ತು ಮಾರುವವರಿಂದ ಕೊಳ್ಳುಗನು ಒಳಗಾಗಬಹುದಾದ ಶೋಷಣೆಯನ್ನು ತಪ್ಪಿಸಲು ವಿಶ್ವ ಸಂಸ್ಥೆಯ ಮಾರ್ಗಸೂಚಿಗಳ ಆಧಾರದ ಮೇಲೆ ಈ ಕಾಯಿದೆಯನ್ನು ಮಾಡಲಾಯಿತು.ಖಾಸಗಿ ವಲಯ, ಸರ್ಕಾರಿ ವಲಯ ಎನ್ನುವ ಭೇದವಿಲ್ಲದೆ, ತಾನು ಪಡೆಯುವ ಸೇವೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾಯಿದೆಯು ಗ್ರಾಹಕನಲ್ಲಿ ಹೆಚ್ಚು ಕಸುವು ತುಂಬುತ್ತದೆ.'ಗ್ರಾಹಕ' ಅನ್ನುವ ಪದದ ವಿವರಣೆಯಿಂದ ಹಿಡಿದು ಗ್ರಾಹಕನಿಗಿರುವ ಹಕ್ಕುಗಳ ಬಗ್ಗೆ ಈ ಕಾಯಿದೆಯಲ್ಲಿ ವಿಸ್ತಾರವಾಗಿ ತಿಳಿಸಲಾಗಿದೆ. ಯಾವುದೇ ಒಂದು ಸರಕನ್ನು ಅಥವಾ ಸೇವೆಯನ್ನು ದುಡ್ಡು ಕೊಟ್ಟು ( ಮಾರುವವನು ಒಪ್ಪಿದಲ್ಲಿ ಹಣವನ್ನು ತಡವಾಗಿ ಪಾವತಿಸಿದರೂ ಸರಿ ) ಪಡೆಯುವವನು ಗ್ರಾಹಕನೆನಿಸಿಕೊಳ್ಳುತ್ತಾನೆ. ಹಾಗೆ ಒಬ್ಬ ಗ್ರಾಹಕನು ದುಡ್ಡು ಕೊಟ್ಟು ಪಡೆದ ಸೇವೆ ಅಥವಾ ಸರಕನ್ನು ಆ ಗ್ರಾಹಕನ ಒಪ್ಪಿಗೆ ಪಡೆದು ಬಳಸುವವರೂ ಗ್ರಾಹಕರಾಗುತ್ತಾರೆ ( ಹಣ ಕೊಡದೆ ಇದ್ದರೂ ).ಉದಾ : ಒಂದು ಮನೆಗೆ ಟಿ ವಿ ಯನ್ನು ಒಬ್ಬ ಹಣ ಕೊಟ್ಟು ತರುತ್ತಾನೆ. ಮನೆ ಮಂದಿಯೆಲ್ಲ ಆ ಟಿವಿ ಯನ್ನು ಬಳಸುತ್ತಾರೆ. ದುಡ್ಡು ಕೊಟ್ಟವನು ಮತ್ತು ದುಡ್ಡು ಕೊಡದೆ ಟಿ ವಿ ಬಳಸುವ ಮಂದಿ - ಎಲ್ಲರೂ "ಗ್ರಾಹಕರು" ಎಂದು ಈ ಕಾಯ್ದೆ ಹೇಳುತ್ತದೆ. ಹಾಗೆ, ಗ್ರಾಹನಿಕರಿಗುವ ಹಕ್ಕುಗಳ ವಿಷಯದ ಬಗ್ಗೆ ಬಂದಾಗ - ಸುರಕ್ಷತೆಯ ಹಕ್ಕು, ಮಾಹಿತಿ ಹಕ್ಕು, ಆಯ್ಕೆಯ ಹಕ್ಕು, ಸಮಸ್ಯೆಯನ್ನು ತಿಳಿಸುವ ಹಕ್ಕು, ಸಮಸ್ಯೆಗೆ ಪರಿಹಾರ ಪಡೆಯುವ ಹಕ್ಕು ಮತ್ತು ಗ್ರಾಹಕ ಸೇವೆ ಬಗ್ಗೆ ಹೆಚ್ಚು ಜ್ಞಾನವನ್ನು ಪಡೆಯುವ ಹಕ್ಕುಗಳ ಬಗ್ಗೆ ತಿಳಿಸಲಾಗಿದೆ.                                            

    ಕಾಯಿದೆಯಲ್ಲಿ ಪ್ರಸ್ತಾಪಿಸಿರುವ ಮಾಹಿತಿ ಹಕ್ಕನ್ನು ಸ್ವಲ್ಪ ವಿವರವಾಗಿ ನೋಡಿದಾಗ ಅದು ಹೀಗೆ ಹೇಳುತ್ತದೆ : "ಗ್ರಾಹಕನು ತಾನು ಕೊಳ್ಳುವ ಸರಕಿನ ಅಥವ ಪಡೆಯುವ ಸೇವೆ ಬಗ್ಗೆ ಮೋಸ ಹೋಗದಿರಲು - ವಸ್ತುವಿನ ಅಥವಾ ಸೇವೆಯ ಗುಣಮಟ್ಟ, ಪ್ರಮಾಣ, ಸಾಮರ್ಥ್ಯ, ಶುದ್ಧತೆ, ಮಾನದಂಡ ಮತ್ತು ಮೌಲ್ಯ, ಇವೆಲ್ಲದರ ಬಗ್ಗೆ ಮಾಹಿತಿ ಹೊಂದುವ ಹಕ್ಕನ್ನು ಹೊಂದಿರುತ್ತಾನೆ".

   ಕನ್ನಡಿಗ ಗ್ರಾಹಕರ ಇಂದಿನ ಸ್ಥಿತಿ: "ವ್ಯಾಪಾರದಲ್ಲಿ ಗ್ರಾಹಕನ ರಕ್ಷಣೆ" ಎಂದೊಡನೆ ಉತ್ಪನ್ನದ ತೂಕ-ಅಳತೆಯಲ್ಲಿ ಏರು-ಪೇರು ಆಗುವ ಬಗ್ಗೆ ಅಥವಾ ಕೊಂಡ ವಸ್ತುವಿಗೆ/ಪಡೆದ ಸೇವೆಗೆ ನಿಗದಿ ಪಡಿಸಿದಕ್ಕಿಂತ ಹೆಚ್ಚಿನ ಹಣ ಕೊಡುವುದರ ಬಗ್ಗೆ ಯೋಚಿಸುವುದು ಹೆಚ್ಚು. ಆದರೆ ತೂಕ-ಅಳತೆ-ದರ ಎಷ್ಟು ಮುಖ್ಯವೋ, ವಸ್ತುವಿನ ಅಥವಾ ಸೇವೆಯ ಬಗ್ಗೆ ನೀಡಬೇಕಾದ ಮಾಹಿತಿ ಜನರ ನುಡಿಯಲ್ಲಿ ಇರುವುದು ಕೂಡ ಅಷ್ಟೇ ಮುಖ್ಯ. ಭಾರತದಲ್ಲಿ ಹೆಚ್ಚಾಗಿ ಗ್ರಾಹಕ ಸೇವೆಗಳು ಮತ್ತು ಉತ್ಪನ್ನದ ಬಗ್ಗೆ ಮಾಹಿತಿಗಳು(ಸರ್ಕಾರಿ ಆಗಿರಲಿ ಅಥವಾ ಖಾಸಗಿ ಆಗಿರಲಿ), ಇಂಗ್ಲೀಶ್ ಹಿಂದಿಯಲ್ಲಿ ಮಾತ್ರ ಸಿಗುತ್ತಿದ್ದು ಆಯಾ ರಾಜ್ಯಗಳ ನುಡಿಯಲ್ಲಿ ಸಿಗದೇ ಇರುವುದು ಸತ್ಯ. 

ನಮ್ಮ ರಾಜ್ಯದ ಮಟ್ಟಿಗೆ ಹೇಳಬೇಕೆಂದರೆ, ಈ ಸಂಗತಿಗಳನ್ನು ಗಮನಿಸಿ : ಔಷಧಿಗಳ ಮೇಲೆ ಮಾಹಿತಿಯು ಇಂಗ್ಲೀಷಿನಲ್ಲಿ ಇರುತ್ತದೆ, ಕನ್ನಡದಲ್ಲಿ ಇರುವುದಿಲ್ಲ - ಅಡುಗೆ ಅನಿಲದ ಸಿಲಿಂಡರ್ ಮೇಲೆ ಭದ್ರತೆ ಸೂಚನೆಗಳು ಇಂಗ್ಲೀಶ್-ಹಿಂದಿಯಲ್ಲಿ ಮಾತ್ರ ಕನ್ನಡದಲ್ಲಿಲ್ಲ, ಬ್ಯಾಂಕುಗಳಲ್ಲಿ ಅರ್ಜಿಗಳು-ಚಲನ್ಗಳು-ಚೆಕ್ಕುಗಳು-ಪಾಸ್ ಬುಕ್ ಗಳು ಇವೆಲ್ಲ ಇಂಗ್ಲೀಶ್-ಹಿಂದಿಯಲ್ಲಿ, ಮನೆ ಬಳಕೆಗೆಂದು ತರುವ ಸಾಧನಗಳ (ಟಿ ವಿ, ಫ್ರಿಡ್ಜ್, ಕುಕರ್ ಇತ್ಯಾದಿ) ಬಳಕೆದಾರರ ಕೈಪಿಡಿಗಳು ಕನ್ನಡದಲ್ಲಿಲ್ಲ, ರೈಲುಗಳಲ್ಲಿ ಸುರಕ್ಷತೆ ಬಗ್ಗೆ ಮಾಹಿತಿ ಕನ್ನಡದಲ್ಲಿಲ್ಲ.

ಹೀಗೆ ' ಕನ್ನಡದಲ್ಲಿ ಇಲ್ಲ' ಗಳನ್ನು ಪಟ್ಟಿ ಮಾಡುತ್ತ ಹೋದರೆ ಕೊನೆಯೇ ಇಲ್ಲ, ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ದುಡ್ಡು ಕೊಡುವ ಗ್ರಾಹಕ, ಸೇವೆಗಾಗಿ ಬೇರೆ ನುಡಿಯನ್ನು ಅವಲಂಬಿಸಬೇಕಾಗುವಂತೆ ಆಗಿರುವುದು ವಿಪರ್ಯಾಸ. ಗ್ರಾಮಾಂತರ ಪ್ರದೇಶಗಳಲ್ಲಿರುವ ಜನರ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ ಅಲ್ಲವೇ? ಗ್ರಾಹಕರಿಗೆ ತಿಳಿದಿಲ್ಲದ ನುಡಿಯಲ್ಲಿ ನೀಡುವ ಸೇವೆ/ಮಾಹಿತಿ ಯಿಂದ ಆಗುವ ಅನಾಹುತಗಳು ಕಡಿಮೆ ಏನಿಲ್ಲ(ಅದರಲ್ಲೂ ಸುರಕ್ಷತೆಯ ಸೂಚನೆಗಳು). ಮೇಲೆ ತಿಳಿಸಿದ ಸಮಸ್ಯೆಗಳು, ಕಾಯ್ದೆಯಲ್ಲಿ ತಿಳಿಸಿರುವ ಗ್ರಾಹಕನಿಗಿರುವ ಮಾಹಿತಿ ಮತ್ತು ಸುರಕ್ಷತೆ ಹಕ್ಕಿನ ಉಲ್ಲಂಘನೆ ಆಗುತ್ತದೆಯಲ್ಲಾ ಅಂತ ಅನಿಸಿದರೂ ಆಶ್ಚರ್ಯವಿಲ್ಲ!

ಗ್ರಾಹಕನ ಪಾತ್ರ: ವಸ್ತುಸ್ಥಿತಿ ಹೀಗಿರುವಾಗ ಗ್ರಾಹಕನು ಈ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುವುದು ಹೇಗೆ ಎಂಬ ಯೋಚನೆ ಸಹಜ. ಸೇವೆಗಳಲ್ಲಿ ಕನ್ನಡವಿಲ್ಲದೆ ತೊಂದರೆಗೆ ಒಳಗಾಗುತ್ತಿದ್ದರೂ ಅದನ್ನು ಪ್ರಶ್ನೆ ಮಾಡಿ ಸರಿಪಡಿಸದೇ ಇದ್ದರೆ ಸೇವೆ ಕೊಡುವವರೂ ಕನ್ನಡವನ್ನು ಬಳಸುವುದಿಲ್ಲ. ಗ್ರಾಹಕ ಸೇವೆಗಳಲ್ಲಿ ಹೆಚ್ಚು ಹೆಚ್ಚು ಕನ್ನಡವನ್ನು ಬಳಸುತ್ತಿದ್ದರೆ ಸೇವೆಯಲ್ಲಿನ ತೊಡಕುಗಳನ್ನು ಸರಿ ಪಡಿಸಬಹುದಲ್ಲದೆ ಕನ್ನಡಕ್ಕೆ ಹೆಚ್ಚಿನ "ಆರ್ಥಿಕ ಶಕ್ತಿ" ಯನ್ನು ತುಂಬಬಹುದು.

National Consumer Day

On 24 December 1986, the Consumer Protection Act (Consumer Protection Act) was made in India.  Therefore, in our country, December 24 is celebrated as "National Consumer Day".  The Act was based on the United Nations Guidelines to protect the interests of consumers and avoid potential exploitation by the seller.  As elaborated in this Act.  The customer who pays for any goods or service (even if the seller agrees to pay the money late).  A customer may also (without paying) the customer's consent to use the service or goods offered by the customer (even if not paid).  Home TVs use that TV.  The Act states that all those who use the TV and those who do not pay - all are "consumers".  As such, when it comes to consumer rights - the right to security, the right to information, the right to choice, the right to a problem, the right to a solution and the need to know more about customer service.


 When looking at the information in the Act, it states: "The consumer has the right to be informed about the quality or quantity, quality, quality, purity, standard and value of the goods or services that he or she receives."


 Today's status as a mirror consumer: "Consumer protection in business" is more about thinking about how to weigh the product or pay more for a product or service.  But as important as weight-to-weight is, it is also important to keep people informed about a product or service.  It is true that most of the information about customer service and product in India (whether government or private) is available in English Hindi and not in the states.


 To the extent of our state, note these facts: Information on medicines is in English, not in Kannada - Security instructions on cooking gas cylinder are not in English-Hindi only  TVs, fridges, cookers, etc.) User manuals are not in Kannada, there is no safety information about trains in Kannada.


 Thus, there is no end to the list of 'no in Kannada', which grows like Hanuman's tail.  It is ironic that a hardworking customer has to rely on a different product for service.  People in the countryside need to think about it too?  The disadvantages of service / information offered to consumers in the unknown are few and far between (especially safety concerns).  No wonder, though, that the aforementioned issues are a violation of the information and security rights of the Customer as stated in the Act!


 Role of the customer: The reality is that the customer is thinking about how to solve the problem.  Service providers do not use Kannada if they suffer from blindness in the service but do not query them.  Using more and more Kannada in customer service can correct service bottlenecks and add more "economic power" to Kannada.




  • ಕೋಕಾ ಕೋಲಾ ಕಂಪನಿಯಿಂದ 2,200 ಮಂದಿಗೆ ಕೊಕ್!
  • ಭಾರತ ಮೂಲದ ಅರವಿಂದ್ ಕೃಷ್ಣ ಐಬಿಎಂ ಸಿಇಒ ಹುದ್ದೆಯಿಂದ ಚೇರ್ಮನ್ ಸ್ಥಾನಕ್ಕೆ
  • 4G ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲನೇ ಸ್ಥಾನ
  • ರೈತರಿಂದ ನೇರ ಗ್ರಾಹಕರಿಗೆ: ಹೀಗೊಂದು ಹೆಜ್ಜೆ...
  • ಅಗ್ಗವಾಗಲಿದೆ ಮೊಬೈಲ್, ಸ್ಥಿರ ದೂರವಾಣಿ ದರ

Comments

Popular posts from this blog

10ನೇ ತರಗತಿ ಇತಿಹಾಸ ಮತ್ತು ಭೂಗೋಳ ಘಟಕಗಳ ರಸಪ್ರಶ್ನೆ ಒಂದೇ ಲಿಂಕ್ ದಲ್ಲಿ

ಹತ್ತನೇ ತರಗತಿಯ ಇತಿಹಾಸ ಭಾಗದ ಸಂಪೂರ್ಣ ಘಟಕಗಳ ರಸಪ್ರಶ್ನೆ